Untitled Document
Sign Up | Login    
Dynamic website and Portals
  

Related News

ಪಠಾಣ್‌ಕೋಟ್‌ ವಾಯುನೆಲೆ ಮೇಲೆ ಮತ್ತೆ ಉಗ್ರರ ದಾಳಿ ಸಾಧ್ಯತೆ: ಕಟ್ಟೆಚ್ಚರ

ಪಠಾಣ್‌ಕೋಟ್‌ ವಾಯುನೆಲೆಯ ಸಮೀಪವಿರುವ ಹಳ್ಳಿಗಳಲ್ಲಿ ಉಗ್ರರು ಅಡಗಿಕೊಂಡಿದ್ದು, ಪಠಾಣ್‌ಕೋಟ್‌ ವಾಯು ನೆಲೆಯ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಈ ಕುರಿತು ಕೇಂದ್ರ ಗೃಹ ಸಚಿವಾಲಯದ ಸಂಸದೀಯ ಸ್ಥಾಯಿ ಸಮಿತಿ ಎಚ್ಚರಿಕೆ ನೀಡಿದೆ. ಈ ಬಗ್ಗೆ ಸರ್ಕಾರಕ್ಕೆ ಮಾಹಿತಿ ನಿಡಲಾಗಿದ್ದು,...

ಭಾರತ - ಪಾಕಿಸ್ತಾನ ಗಡಿಪ್ರದೇಶದಲ್ಲಿ ಲೇಸರ್ ಗೋಡೆ ನಿರ್ಮಿಸಲು ನಿರ್ಧಾರ

ಉಗ್ರಗಾಮಿಗಳ ಒಳನುಸುಳುವಿಕೆಯನ್ನು ತಡೆಯಲು, ಭಾರತ - ಪಾಕಿಸ್ತಾನ ಗಡಿಪ್ರದೇಶದಲ್ಲಿನ 40 ಜಾಗಗಳನ್ನು ಗುರುತಿಸಿ ಅಲ್ಲಿ ಲೇಸರ್ ಗೋಡೆಗಳನ್ನು ನಿರ್ಮಿಸಲು ಗೃಹ ಸಚಿವಾಲಯ ನಿರ್ಧರಿಸಿದೆ. ಪಠಾಣ್ ಕೋಟ್ ದಾಳಿಯ ನಂತರ ಉಗ್ರರ ಒಳನುಸುಳುವಿಕೆ ತಡೆಯಲು ಗೃಹ ಸಚಿವಾಲಯ ಅತ್ಯಂತ ಪ್ರಾಮುಖ್ಯತೆ ಕೊಟ್ಟ ಹಿನ್ನಲೆಯಲ್ಲಿ...

ದಾವೂದ್, ಹಫೀಜ್‌ ಸಯೀದ್, ಲಖ್ವಿ ವಿರುದ್ಧ ಕ್ರಮಕ್ಕೆ ಭಾರತದ ಒತ್ತಡ

ದೇಶದ ಮೋಸ್ಟ್‌ ವಾಂಟೆಡ್‌ ಉಗ್ರರಾದ ದಾವೂದ್‌ ಇಬ್ರಾಹಿಂ, ಜಮಾತ್‌ ಉದ್‌ ದವಾ ಮುಖ್ಯಸ್ಥ ಹಫೀಜ್‌ ಸಯೀದ್‌, ಲಷ್ಕರ್‌ ಕಮಾಂಡರ್‌ ಝಕಿ ಉರ್‌ ರೆಹಮಾನ್‌ ಲಖ್ವಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನದ ಮೇಲೆ ಭಾರತ ಮತ್ತೂಮ್ಮೆ ಒತ್ತಡ ಹೇರಲು ಮುಂದಾಗಿದೆ. ಈ ಸಂಬಂಧ...

ತಮಿಳುನಾಡಿನಲ್ಲಿ ಕೇರಳದ ಪ್ರಮುಖ ಮಾವೋವಾದಿ ನಾಯಕರ ಬಂಧನ

ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಬೇಕಾಗಿದ್ದ ಕೇರಳದ ಪ್ರಮುಖ ಮಾವೋವಾದಿ ನಾಯಕ ರೂಪೇಶ್ ಹಾಗೂ ಆತನ ಪತ್ನಿ ಶ್ಯಾನ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶ, ತಮಿಳುನಾಡು ಪೊಲೀಸರು ಹಾಗೂ ಕೇರಳದ ಮಾವೋವಾದಿ ನಿಗ್ರಹ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ರೂಪೇಶ್ ಹಾಗೂ ಆತನ ಪತ್ನಿಯೊಂದಿಗೆ...

ಹಣವಿಲ್ಲದೇ ಮುಚ್ಚುವ ಸ್ಥಿತಿಗೆ ತಲುಪಿದ ಗ್ರೀನ್ ಪೀಸ್ ಎನ್.ಜಿ.ಒ

ವಿದೇಶದಿಂದ ಅಕ್ರಮವಾಗಿ ದೇಣಿಗೆ ಪಡೆಯುತ್ತಿದ್ದ ಎನ್.ಜಿ.ಒ ಗಳ ವಹಿವಾಟುಗಳ ಮೇಲೆ ಕಣ್ಣಿಡಲು ಕೇಂದ್ರ ಸರ್ಕಾರ ಆದೇಶಿಸಿದ ಕೆಲವೇ ತಿಂಗಳಲ್ಲಿ ಗ್ರೀನ್ ಪೀಸ್ ಎನ್.ಜಿ.ಒಗೆ ಹಣದ ಕೊರತೆ ಎದುರಾಗಿದೆ! ಹಣದ ಕೊರತೆ ಎದುರಾಗಿರುವ ಪರಿಣಾಮ ಗ್ರೀನ್ ಪೀಸ್ ಎನ್.ಜಿ.ಒ ಮುಚ್ಚಲು ತಯಾರಿ ನಡೆಸಿದೆ....

ಫೋರ್ಡ್ ಫೌಂಡೇಷನ್ ವಿರುದ್ಧ ರಾಜಕೀಯ ಪಕ್ಷಕ್ಕೆ ಅಕ್ರಮ ದೇಣಿಗೆ ನೀಡಿರುವ ಆರೋಪ

ವಿದೇಶಿ ದೇಣಿಗೆ ಸ್ವೀಕರಿಸುತ್ತಿರುವ ಎನ್.ಜಿ.ಒಗಳ ಬಗ್ಗೆ ಮತ್ತಷ್ಟು ಮಾಹಿತಿ ಹೊರಬಿದ್ದಿದೆ. ಯು.ಎಸ್ ಮೂಲದ ಫೋರ್ಡ್ ಫೌಂಡೇಶನ್ ರಾಜಕೀಯ ಪಕ್ಷಕ್ಕೆ ಹಾಗೂ ಲಾಭದ ಉದ್ದೇಶ ಇಟ್ಟುಕೊಂಡು ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳಿಗೆ ಅಕ್ರಮವಾಗಿ, ದೇಣಿಗೆ ನೀಡುತ್ತಿದೆ ಎಂಬುದು ತನಿಖೆ ಮೂಲಕ ಬಹಿರಂಗವಾಗಿದೆ. ಫೋರ್ಡ್ ಫೌಂಡೇಷನ್ ವಹಿವಾಟಿನ...

ಭಯೋತ್ಪಾದಕರಿಗಾಗಿಯೇ ಪ್ರತ್ಯೇಕ ಜೈಲು ವ್ಯವಸ್ಥೆ ಮಾಡಿ: ಕೇಂದ್ರ ಸರ್ಕಾರದ ಆದೇಶ

ಭಯೋತ್ಪಾದಕರು ಜೈಲಿನಲ್ಲಿ ತಮ್ಮೊಂದಿಗಿರುವ ಖೈದಿಗಳನ್ನು ಉಗ್ರವಾದ ನಡೆಸುವಂತೆ ಪ್ರಚೋದಿಸುತ್ತಿರುವುದು ಕಂಡುಬಂದಿದ್ದು, ಭಯೋತ್ಪಾದಕರಿಗಾಗಿಯೇ ಪ್ರತ್ಯೇಕ ಜೈಲು ವವಸ್ಥೆ ಮಾಡಬೇಕಿದೆ ಎಂದು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ. ಭಯೋತ್ಪಾದಕರು ಇತರ ಕ್ರಿಮಿನಲ್ ಅಪರಾಧಿಗಳನ್ನು ತಮ್ಮೊಂದಿಗೆ ಸೇರುವಂತೆ ಪ್ರಚೋದಿಸುತ್ತಿರುವ ಬಗ್ಗೆ ಕೇಂದ್ರದ ಭದ್ರತಾ...

ನೇಪಾಳ ಭೂಕಂಪ: ನಾಲ್ಕು ಸಾವಿರ ದಾಟಿದ ಸಾವಿನ ಸಂಖ್ಯೆ

ಭೀಕರ ಭೂಕಂಪಕ್ಕೆ ತತ್ತರಿಸಿರುವ ನೇಪಾಳದಲ್ಲಿ ಸಾವಿನ ಸಂಖ್ಯೆ ಕ್ಷಣಕ್ಷಣಕ್ಕೂ ಏರಿಕೆಯಾಗುತ್ತಿದೆ. ಇತ್ತೀಚಿನ ವರದಿ ಪ್ರಕಾರ 4,352 ಜನರು ಭೂಕಂಪಕ್ಕೆ ಬಲಿಯಾಗಿದ್ದು, ಮೃತರ ಸಂಖ್ಯೆ 6 ಸಾವಿರ ದಾಟುವ ಸಾಧ್ಯತೆ ಇದೆ. ಸಾವಿನ ಸಂಖ್ಯೆ ಬಗ್ಗೆ ನೇಪಾಳದ ಗೃಹ ಸಚಿವಾಲಯ ಅಧಿಕೃತ ಮಾಹಿತಿ...

ಹಿಂದಿ ದಿವಸ್: ಇಂದಿರಾ, ರಾಜೀವ್ ಗಾಂಧಿ ಹೆಸರಿನ ಪ್ರಶಸ್ತಿಗಳಿಗೆ ಮರು ನಾಮಕರಣ

'ಹಿಂದಿ ದಿವಸ್' ಅಂಗವಾಗಿ ನೀಡಲಾಗುತ್ತಿದ್ದ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹೆಸರಿನ ಪ್ರಶಸ್ತಿಗಳಿಗೆ ಕೇಂದ್ರ ಸರ್ಕಾರ ಮರು ನಾಮಕರಣ ಮಾಡಿದೆ. ಪ್ರತಿ ವರ್ಷ ಹಿಂದಿ ದಿವಸ್ ಅಂಗವಾಗಿ ಕೇಂದ್ರ ಸರ್ಕಾರದ ವತಿಯಿಂದ ಮಾಜಿ ಪ್ರಧಾನಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರ...

ಪಂಡಿತರ ಪುನರ್ವಸತಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಪ್ರತ್ಯೇಕತಾವಾದಿ ಬಂಧನ

'ಕಾಶ್ಮೀರ ಪ್ರತ್ಯೇಕತಾವಾದಿ' ಯಾಸೀನ್ ಮಲೀಕ್ ನನ್ನು ಜಮ್ಮು-ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ. ಕಾಶ್ಮೀರಿ ಪಂಡಿತರಿಗೆ ಪುನರ್ವಸತಿ ಕಲ್ಪಿಸುವುದನ್ನು ವಿರೋಧಿಸಿ ಪ್ರತ್ಯೇಕತಾವಾದಿ ಯಾಸೀನ್ ಮಲೀಕ್ ಪ್ರತಿಭಟನೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿದೆ. ಕಾಶ್ಮೀರಿ ಪಂಡಿತರಿಗೆ ಪ್ರತ್ಯೇಕ ಟೌನ್ ಶಿಪ್ ನಿರ್ಮಿಸುವ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲು...

ಎ.ಎಫ್.ಎಸ್.ಪಿ.ಎ ಕಾಯ್ದೆ ಹಿಂಪಡೆಯಲು ಇದು ಸೂಕ್ತ ಸಮಯ ಅಲ್ಲ: ರಾಜನಾಥ್ ಸಿಂಗ್

ಜಮ್ಮು-ಕಾಶ್ಮೀರದಲ್ಲಿ ಸಶಸ್ತ್ರ ಪಡೆಗಳಿಗೆ ನೀಡಲಾಗಿರುವ ವಿಶೇಷಾಧಿಕಾರ ಕಾಯ್ದೆ(AFSPA)ಯನ್ನು ಹಿಂಪಡೆಯಲು ಇದು ಸೂಕ್ತ ಸಮಯ ಅಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಜಮ್ಮು-ಕಾಶ್ಮೀರದ ಗಡಿ ಪ್ರದೇಶದಲ್ಲಿ ಕಳೆದ 2 ದಿನಗಳ ಹಿಂದೆ ಉಗ್ರರು ಪೊಲೀಸ್ ಠಾಣೆ ಮೇಲೆ ದಾಳಿ...

ಮತಾಂತರ, ಅದರ ನಿಷೇಧ ಕಾಯ್ದೆ ಬಗ್ಗೆ ಚರ್ಚೆ ನಡೆಯಲಿ: ರಾಜನಾಥ್ ಸಿಂಗ್

ಅಲ್ಪಸಂಖ್ಯಾತರಿಗೆ ಸಂಪೂರ್ಣ ಭದ್ರತೆ ಒದಗಿಸುವುದಾಗಿ ಭರವಸೆ ನೀಡಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಮತಾಂತರ ನಡೆಸುವುದನ್ನು ಪ್ರಶ್ನಿಸಿದ್ದು, ಈ ಬಗ್ಗೆ ಚರ್ಚೆ ನಡೆಯಲಿ ಎಂದು ಹೇಳಿದ್ದಾರೆ. ನವದೆಹಲಿಯಲ್ಲಿ ರಾಜ್ಯ ಅಲ್ಪಸಂಖ್ಯಾತ ಆಯೋಗದ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ರಾಜನಾಥ್ ಸಿಂಗ್, ಮತಾಂತರ...

ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ : ಇಬ್ಬರು ಪೊಲೀಸರ ಹತ್ಯೆ

'ಜಮ್ಮು-ಕಾಶ್ಮೀರ'ದ ಕತುವಾ ಜಿಲ್ಲೆಯ ಪೊಲೀಸ್ ಠಾಣೆಯೊಂದಕ್ಕೆ ನುಗ್ಗಿದ ಉಗ್ರರು ಒಬ್ಬ ಗಡಿ ಭದ್ರತಾ ಪಡೆ ಸಿಬ್ಬಂದಿ ಸೇರಿದಂತೆ ಇಬ್ಬರನ್ನು ಹತ್ಯೆ ಮಾಡಿದ್ದಾರೆ. ಉಗ್ರರ ದಾಳಿಯಲ್ಲಿ ಇಬ್ಬರು ಮೃತಪಟ್ಟು ಇತರೆ ಮೂವರು ಗಾಯಗೊಂಡಿದ್ದಾರೆ. 4 ಜನ ಸಶಸ್ತ್ರ ಉಗ್ರರು ಕತುವಾದ ರಾಜ್‌ ಬಾಗ್...

ಭಾರತದ ಮೇಲೆ ಇಸ್ಲಾಮಿಕ್ ಸ್ಟೇಟ್ ಉಗ್ರರ ಪ್ರಭಾವ ನಗಣ್ಯ: ರಾಜನಾಥ್ ಸಿಂಗ್

'ಪಾಕಿಸ್ತಾನ', ಭಾರತದ ಮೇಲೆ ನಡೆಸುತ್ತಿರುವ ಪ್ರಾಕ್ಸಿ ಯುದ್ಧವನ್ನು ನಿಲ್ಲಿಸಬೇಕು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಎಚ್ಚರಿಸಿದ್ದಾರೆ. ಜೈಪುರದಲ್ಲಿ ನಡೆದ ಅಂತಾರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ರಾಜನಾಥ್ ಸಿಂಗ್, ಪಾಕಿಸ್ತಾನ ತಕ್ಷಣವೇ ಭಾರತದ ವಿರುದ್ಧ ನಡೆಸುತ್ತಿರುವ ಪ್ರಾಕ್ಸಿ...

ರವಿ ಸಾವಿನ ಪ್ರಕರಣ: ಸಚಿವ ಸಂಪುಟದ ಒತ್ತಾಯಕ್ಕೂ ಮಣಿಯದ ಸಿದ್ದು ಸರ್ಕಾರ

ದಕ್ಷ ಐ.ಎ.ಎಸ್ ಅಧಿಕಾರಿ ಡಿ.ಕೆ.ರವಿ ನಿಗೂಢ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಸಂಪುಟ ಸಚಿವರ ಒತ್ತಾಯದ ಹೊರತಾಗಿಯೂ ಸಿಬಿಐ ತನಿಖೆಗೆ ಒಪ್ಪಿಸುವ ಪ್ರಶ್ನೆಯೇ ಇಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ. ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ...

ಸೈಫ್ ಅಲಿ ಖಾನ್ ಗೆ ನೀಡಲಾಗಿರುವ ಪದ್ಮ ಪ್ರಶಸ್ತಿ ಹಿಂಪಡೆಯುವ ಸಾಧ್ಯತೆ?

ನಟ ಸೈಫ್ ಅಲಿ ಖಾನ್ ಗೆ ನೀಡಲಾಗಿರುವ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್ ಪಡೆಯಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎಂಬ ಬಗ್ಗೆ ವರದಿಗಳು ಪ್ರಕಟವಾಗಿದೆ. ನಟ ಸೈಫ್ ಅಲಿ ಖಾನ್‌ ಮುಂಬೈನ ಹೋಟೆಲ್‌ ಒಂದರಲ್ಲಿ ಗಲಾಟೆ ನಡೆಸಿದ ಪ್ರಕರಣದ ವರದಿಯನ್ನು ತ್ವರಿತವಾಗಿ ನೀಡುವಂತೆ...

ನಿಷೇಧದಿಂದಲೇ ಇಂಡಿಯಾಸ್ ಡಾಟರ್ ಅತಿ ಹೆಚ್ಚು ಪ್ರಚಾರ ಪಡೆಯಿತು: ಲೆಸ್ಲಿ ಉಡ್ವಿನ್

'ಇಂಡಿಯಾಸ್ ಡಾಟರ್' ಸಾಕ್ಷ್ಯಚಿತ್ರ ಅತಿ ಹೆಚ್ಚು ವೀಕ್ಷಣೆಯಾಗಿರುವುದಕ್ಕೆ ಭಾರತ ಸರ್ಕಾರ ನಿಷೇಧ ಹೇರಿರುವುದೇ ಕಾರಣ ಎಂದು ಸಾಕ್ಷ್ಯಚಿತ್ರ ನಿರ್ಮಾಪಕಿ ಲೆಸ್ಲಿ ಉಡ್ವಿನ್ ಹೇಳಿದ್ದಾರೆ. ಎಕೆನಾಮಿಕ್ ಟೈಮ್ಸ್ ಗೆ ನೀಡಿರುವ ಸಂದರ್ಶನದಲ್ಲಿ ಭಾರತ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಲೆಸ್ಲಿ ಉಡ್ವಿನ್, ಸಾಕ್ಷ್ಯಚಿತ್ರದ...

ಅಕ್ರಮ ಆರೋಪ: ಸ್ವತಃ ತನಿಖೆಗೆ ಕೋರಿದ ನಾಗಾಲ್ಯಾಂಡ್ ಸಿಎಂ

ತಮ್ಮ ವಿರುದ್ಧ ಕೇಳಿ ಬಂದಿರುವ ಕಪ್ಪು ಹಣದ ಆರೋಪ ಕುರಿತಂತೆ ತನಿಖೆ ನಡೆಸಬೇಕು ಎಂದು ನಾಗಾಲ್ಯಾಂಡ್ ಮುಖ್ಯಮಂತ್ರಿ ಟಿ.ಆರ್.ಜಿಲಾಂಗ್ ಅವರೇ ಸ್ವತಃ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ. ಮುಖ್ಯಮಂತ್ರಿ ಜಿಲಾಂಗ್ ವಿರುದ್ಧ 80ಕೋಟಿ ರೂ. ಅವ್ಯವಹಾರದ ಆರೋಪ ಕೇಳಿ...

ಇಂಡಿಯಾಸ್ ಡಾಟರ್ ಸಾಕ್ಷ್ಯ ಚಿತ್ರ ತೆಗೆದುಹಾಕುವಂತೆ ಯೂಟ್ಯೂಬ್ ಗೆ ಕೇಂದ್ರ ಸರ್ಕಾರ ತಾಕೀತು

ನಿಷೇಧದ ನಡುವೆಯೂ ಬಿಬಿಸಿ ನಿರ್ಮಿತ ಇಂಡಿಯಾಸ್ ಡಾಟರ್ ಸಾಕ್ಷ್ಯ ಚಿತ್ರವನ್ನು ಕೂಡಲೇ ತೆಗೆದುಹಾಕುವಂತೆ ಕೇಂದ್ರ ಸರ್ಕಾರ ಯುಟ್ಯೂಬ್ ಗೆ ಸೂಚನೆ ನೀಡಿದೆ. ಭಾರತ ಸರ್ಕಾರದ ನಿಷೇಧದ ಹೊರತಾಗಿಯೂ ಬಿಬಿಸಿ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡಿದ್ದಲ್ಲದೆ, ಯುಟ್ಯೂಬ್ ನಲ್ಲಿ ಅದನ್ನು ಅಪ್ಲೋಡ್ ಮಾಡಿತ್ತು. ಈ ಹಿನ್ನೆಲೆಯಲ್ಲಿ...

ಪಾದಚಾರಿಗಳ ಅನುಕೂಲಕ್ಕಾಗಿ ಸ್ಕೈ ವಾಕ್ ನಿರ್ಮಾಣ: ಕೆ.ಜೆ ಜಾರ್ಜ್

ಪಾದಚಾರಿಗಳು ರಸ್ತೆ ದಾಟಲು ಅನುಕೂಲವಾಗುವಂತೆ ಸ್ಕೈ ವಾಕ್ ಗಳನ್ನು ನಿರ್ಮಿಸಲಾಗುವುದು ಎಂದು ಗೃಹ ಸಚಿವ ಜಾರ್ಜ್ ಹೇಳಿದ್ದಾರೆ. ನೀರಿನ ಟ್ಯಾಂಕರ್ ಗೆ ಸಿಲುಕಿ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆಯನ್ನು ಖಂಡಿಸಿ ಹೆಬ್ಬಾಳದಲ್ಲಿ ವಿದ್ಯಾರ್ಥಿಗಳು ಹಾಗೂ ಕೆಲ ಸಂಘಟನೆಗಳ ಕಾರ್ಯಕರ್ತರು ಬೃಹತ್ ಪ್ರತಿಭಟನೆ...

ಪರೀಕ್ಷಾ ಮಂಡಳಿ ಹಗರಣ: ಮಧ್ಯಪ್ರದೇಶ ರಾಜ್ಯಪಾಲರಿಗೆ ರಾಜೀನಾಮೆಗೆ ಸೂಚನೆ

ಮಧ್ಯಪ್ರದೇಶದ ವೃತ್ತಿಪರ ಪರೀಕ್ಷಾ ಮಂಡಳಿ ನೇಮಕತಿ ಹಗರಣದಲ್ಲಿ ಶಾಮೀಲಾದ ಆರೋಪ ಹಿನ್ನಲೆಯಲ್ಲಿ ರಾಜ್ಯಪಾಲ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಕೇಂದ್ರ ಗೃಹಸಚಿವಾಲಯ ರಾಮ್ ನರೇಶ್ ಯಾದವ್ ಗೆ ಸೂಚನೆ ನೀಡಿದೆ. ವೃತ್ತಿಪರ ಶಿಕ್ಷಣ ಮಂಡಳಿಯಲ್ಲಿನ ನೇಮಕಾತಿ ಹಗರಣ ನಡೆದಿದ್ದು, ಮಧ್ಯಪ್ರದೇಶ ಸ್ಪೆಷಲ್ ಟಾಸ್ಕ್ ಪೋರ್ಸ್...

ದೆಹಲ್ಲಿಯಲ್ಲಿ ಚರ್ಚ್ ಗಳಿಗಿಂತಲೂ ದೇವಾಲಯಗಳ ಮೇಲೆಯೇ ಹೆಚ್ಚು ದಾಳಿ!

ನವದೆಹಲಿಯಲ್ಲಿ ಚರ್ಚ್ ಗಳಿಗಿಂತ ಹೆಚ್ಚು ದೇವಾಲಯಗಳು, ಗುರುದ್ವಾರಗಳ ಮೇಲೆ ದಾಳಿ ನಡೆದಿದೆ ಎಂದು ದೆಹಲಿ ಪೊಲೀಸ್ ಆಯುಕ್ತ ಬಿ.ಎಸ್ ಬಸ್ಸಿ ಹೇಳಿದ್ದಾರೆ. ಕೇಂದ್ರ ಗೃಹ ಸಚಿವಾಲಯಕ್ಕೆ ದೆಹಲಿ ಪೊಲೀಸ್ ಆಯುಕ್ತರು ನೀಡಿರುವ ಮಾಹಿತಿಯ ಪ್ರಕಾರ ಕಳೆದ ವರ್ಷ ಚರ್ಚ್ ಗಳಿಗಿಂತ ಹೆಚ್ಚು...

ನಮ್ಮದು ಹಿಂದೂ ವಿರೋಧಿ ಸರ್ಕಾರವಲ್ಲ : ಕೆ.ಜೆ. ಜಾರ್ಜ್

ನಮ್ಮ ಸರ್ಕಾರ ಹಿಂದೂ ವಿರೋಧಿ ಸರ್ಕಾರ ಅಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಬಹುತೇಕ ಹಿಂದೂಗಳೇ ಸರ್ಕಾರದಲ್ಲಿದ್ದಾರೆ ಎಂದು ಗೃಹ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ. ವಿಶ್ವಹಿಂದೂ ಪರಿಷತ್ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಪ್ರವೀಣ್ ತೊಗಾಡಿಯಾಗೆ ನಿರ್ಬಂಧ ವಿಧಿಸಿರುವ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ...

ಮೆಸೆಂಜರ್ ಆಫ್ ಗಾಡ್ ವಿವಾದ: ಸೆನ್ಸಾರ್ ಮಂಡಳಿ ಅಧ್ಯಕ್ಷೆ ಲೀಲಾ ಸ್ಯಾಮ್‌ ಸನ್ ರಾಜೀನಾಮೆ

'ಕೇಂದ್ರ ಸೆನ್ಸಾರ್ ಮಂಡಳಿ' ಅಧ್ಯಕ್ಷ ಸ್ಥಾನಕ್ಕೆ ಲೀಲಾ ಸ್ಯಾಮ್ ಸನ್ ರಾಜೀನಾಮೆ ನೀಡಿದ್ದಾರೆ. ಮೆಸೆಂಜರ್ ಆಫ್ ಗಾಡ್ ಚಿತ್ರ ಪ್ರದರ್ಶನಕ್ಕೆ ಕೇಂದ್ರ ಸೆನ್ಸಾರ್ ಮಂಡಳಿ ಅನುಮತಿ ನೀಡಿದ್ದು, ಲೀಲಾ ಸ್ಯಾಮ್‌ ಸನ್ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದಾರೆ. ಈ...

ಭಾರತದಲ್ಲಿ ಇನ್ಮುಂದೆ ಶಸ್ತ್ರಾಸ್ತ್ರಗಳ ಪರವಾನಗಿ ಪಡೆಯುವುದು ಸುಲಭ!

ಇನ್ನು ಮುಂದಿನ ದಿನಗಳಲ್ಲಿ ಪರವಾನಗಿ ಶಸ್ತ್ರಾಸ್ತ್ರಗಳನ್ನು ಖರೀದಿಸುವುದು ಭಾರತದಲ್ಲಿ ಸುಲಭವಾಗಲಿದೆ. ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ ಪರವಾನಗಿ ಶಸ್ತ್ರಾಸ್ತ್ರಗಳ ಖರೀದಿ ಪ್ರಕ್ರಿಯೆಯನ್ನು ಸರಳ ಮತ್ತು ಸಾರ್ವಜನಿಕ ಸ್ನೇಹಿಯನ್ನಾಗಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಎಕನಾಮಿಕ್ ಟೈಮ್ಸ್ ಗೆ ಗೃಹ ಸಚಿವಾಲಯದ...

ಸಿಎಂ ಪ್ರಯಾಣಿಸಬೇಕಿದ್ದ ಹೆಲಿಕಾಫ್ಟರ್ ನಲ್ಲಿ ಬೆಂಕಿ:ತನಿಖೆಗೆ ಗೃಹ ಸಚಿವರಿಂದ ಆದೇಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಯಾಣಿಸಬೇಕಿದ್ದ ಹೆಲಿಕಾಫ್ಟರ್ ನಲ್ಲಿ ಬೆಂಕಿ ಕಾಣಿಸಿಕೊಂಡ ಪ್ರಕರಣವನ್ನು ಗೃಹ ಸಚಿವ ಕೆ.ಜೆ ಜಾರ್ಜ್ಜಾ, ಉನ್ನತ ತನಿಖೆಗೆ ಆದೇಶಿಸಿದ್ದಾರೆ. ಜ.10ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಹೆಚ್.ಎ.ಎಲ್ ವಿಮಾನ ನಿಲ್ದಾಣದಿಂಡ ಹೆಲಿಕಾಫ್ಟರ್ ನಲ್ಲಿ ಪ್ರಯಾಣಿಸಬೇಕಿತ್ತು. ಆದರೆ ಸಿ.ಎಂ ತೆರಳಬೇಕಿದ್ದ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು....

ರಾಜಸ್ತಾನದ 16 ಸಚಿವರಿಗೆ ಇಂಡಿಯನ್ ಮುಜಾಹಿದ್ದೀನ್ ಉಗ್ರರಿಂದ ಬೆದರಿಕೆ

'ರಾಜಸ್ತಾನ'ದ 16 ಸಚಿವರಿಗೆ ಇಂಡಿಯನ್ ಮುಜಾಹಿದ್ದೀನ್ ಉಗ್ರರು ಇ-ಮೇಲ್ ಮೂಲಕ ಬೆದರಿಕೆ ಹಾಕಿದ್ದಾರೆ. 2015 ಜನವರಿ 26, ಗಣರಾಜ್ಯೋತ್ಸವ ದಿನದಂದು ರಾಜ್ಯದಲ್ಲಿ ವಿಧ್ವಂಸಕ ಕೃತ್ಯ ನಡೆಸಲಾಗುವುದು ಎಂದು ಬೆದರಿಕೆ ಹಾಕಲಾಗಿದೆ. ಬೆದರಿಕೆ ಸಂದೇಶದಿಂದಾಗಿ ರಾಜಸ್ಥಾನದಲ್ಲಿ ಆತಂಕ ಸೃಷ್ಟಿಯಾಗಿದ್ದು, ಸಚಿವರಿಗೆ ಬೆದರಿಕೆ ಹಾಕಿರುವ...

ಟ್ವಿಟರ್ ಉಗ್ರ ಮೆಹ್ದಿಗೆ ಇದ್ದ ಹಿಂಬಾಲಕರಲ್ಲಿ ಶೇ.60ರಷ್ಟು ಮುಸ್ಲಿಮೇತರರು!

'ಇರಾಕ್' ನ ಐ.ಎಸ್.ಐ.ಎಸ್ ಉಗ್ರ ಸಂಘಟನೆಯ ಟ್ವಿಟರ್ ಖಾತೆ ನಿರ್ವಹಿಸುತ್ತಿದ್ದ ಮೆಹ್ದಿಯ ಶೇ.60ರಷ್ಟು ಅನುಯಾಯಿಗಳು ಮುಸ್ಲಿಮೇತರರು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಮೆಹ್ದಿಯ ಟ್ವಿಟರ್ ಖಾತೆಯನ್ನು ಅನುಸರಿಸುತ್ತಿದ್ದ ಮುಸ್ಲಿಮರಲ್ಲಿ ಪಶ್ಚಿಮ ದೇಶದ ನಾಗರಿಕರು ಪ್ರಮುಖವಾಗಿ ಯು.ಕೆ ಯವರು...

ಸಂವಿಧಾನದ 370ನೇ ವಿಧಿ ಚುನಾವಣಾ ವಿಷಯ ಅಲ್ಲ : ರವಿಶಂಕರ್ ಪ್ರಸಾದ್

ಸಂವಿಧಾನದ 370ನೇ ವಿಧಿ ಜಮ್ಮು-ಕಾಶ್ಮೀರದ ಚುನಾವಣಾ ವಿಷಯ ಅಲ್ಲ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ. ಜಮ್ಮು-ಕಾಶ್ಮೀರಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನದ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಈಗಾಗಲೇ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಇದು ಚುನಾವಣಾ...

26/11ಉಗ್ರರ ದಾಳಿ ತನಿಖೆ ವಿಳಂಬಕ್ಕೆ ಪಾಕ್ ವಿರುದ್ಧ ರಾಜನಾಥ್ ಸಿಂಗ್ ಅಸಮಾಧಾನ

'26/11 ಉಗ್ರರ ದಾಳಿ'ಯ ವಿಚಾರಣೆಯಲ್ಲಿ ಪಾಕಿಸ್ತಾನ ಅನುಸರಿಸುತ್ತಿರುವ ವಿಳಂಬ ಧೋರಣೆಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 2008ರ ನ.26ರಂದು ಮುಂಬೈ ನಲ್ಲಿ ನಡೆದಿದ್ದ ಉಗ್ರರ ದಾಳಿಯಲ್ಲಿ ಮೃತಪಟ್ಟ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಿದ ನಂತರ ಮಾತನಾಡಿದ ರಾಜನಾಥ್...

ಕಿಸ್ ಆಫ್ ಲವ್ ಗೆ ಸಿ.ಎಂ ವಿರೋಧ: ಅಶ್ಲೀಲ ಪ್ರತಿಭಟನೆಗೆ ಕಾನೂನು ಕ್ರಮದ ಎಚ್ಚರಿಕೆ

'ನೈತಿಕ ಪೊಲೀಸ್ ಗಿರಿ' ವಿರೋಧಿಸಿ ಬೆಂಗಳೂರಿನಲ್ಲಿ ನ.22ರಂದು ಆಯೋಜಿಸಲಾಗಿರುವ ಕಿಸ್ ಆಫ್ ಲವ್ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಕಿಸ್ ಡೇ ಬಗ್ಗೆ ಪ್ರತಿಕ್ರಿಯಿಸಿರುವ ಸಿ.ಎಂ, ಕಿಸ್ ಆಫ್ ಲವ್ ಪ್ರತಿಭಟನೆಗೆ ಅಸಮಾಧಾನ ವ್ಯಕ್ತಪಡಿಸಿದ್ದು. ಅಶ್ಲೀಲ-ಅಸಭ್ಯವಾಗಿ ಪ್ರತಿಭಟನೆ ನಡೆಸುವವರ...

ಬಾಬಾ ರಾಮ್ ದೇವ್ ಗೆ ಝಡ್ ಪ್ಲಸ್ ಭದ್ರತೆ

ಜೀವ ಬೆದರಿಕೆ ಹಿನ್ನೆಲೆಯಲ್ಲಿ ಯೋಗ ಗುರು ಬಾಬಾ ರಾಮ್‌ ದೇವ್‌ಗೆ ಝಡ್ ಶ್ರೇಣಿಯ ಭದ್ರತೆಯನ್ನು ಕೇಂದ್ರ ಸರ್ಕಾರ ಒದಗಿಸಿದೆ. ಬಾಬಾ ರಾಮ್‌ ದೇವ್‌ಗೆ ಜೀವ ಬೆದರಿಕೆಯಿದೆ ಎಂಬ ಭದ್ರತಾ ಸಂಸ್ಥೆಗಳ ಮಾಹಿತಿಯನ್ವಯ ಕೇಂದ್ರ ಗೃಹ ಸಚಿವಾಲಯ ಸೂಕ್ತ ಭದ್ರತೆ ಒದಗಿಸುವ ಹಿನ್ನೆಲೆಯಲ್ಲಿ ದೇಶದ...

ಕಿಸ್ ಆಫ್ ಲವ್ ಗೆ ರಾಜ್ಯಾದ್ಯಂತ ವಿರೋಧ

'ನೈತಿಕ ಪೊಲೀಸ್ ಗಿರಿ'ವಿರೋಧಿಸಿ ಬೆಂಗಳೂರಿನಲ್ಲಿ ನ.22ರಂದು ಆಯೋಜಿಸಲಾಗಿರುವ ಕಿಸ್ ಆಫ್ ಲವ್ ಕಾರ್ಯಕ್ರಮಕ್ಕೆ ರಾಜ್ಯಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿದೆ. ಮಂಗಳೂರಿನ ಮಹಿಳಾ ದೌರ್ಜನ್ಯ ವಿರೋಧಿ ಸಮಿತಿ ಅಧ್ಯಕ್ಷೆ ವಿದ್ಯಾ ದಿವಾಕರನ್ ಬೆಂಗಳೂರಿನ ಎಂ.ಜಿ ರೋಡ್ ನಲ್ಲಿ ಕಿಸ್ ಆಫ್ ಲವ್ ಕಾರ್ಯಕ್ರಮ...

ಭಾರತದೊಳಗೆ ಚೀನಾ ರಸ್ತೆ ನಿರ್ಮಿಸಿದರೆ ಧ್ವಂಸ ಮಾಡುತ್ತೇವೆ: ರಾಜನಾಥ್ ಸಿಂಗ್

ಭಾರತದ ಗಡಿಯೊಳಗೆ ರಸ್ತೆಗಳನ್ನು ನಿರ್ಮಿಸದಂತೆ ಚೀನಾಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ. ನವದೆಹಲಿಯಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ಒಂದು ವೇಳೆ ಚೀನಾ ಭಾರತದ ಗಡಿಯೊಳಗೆ ರಸ್ತೆ ನಿರ್ಮಿಸಿದರೆ ಅದನ್ನು ಧ್ವಂಸ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ....

ಸಾಮಾಜಿಕ ಜಾಲತಾಣಗಳಲ್ಲಿ ಜಿಹಾದ್ ಚಟುವಟಿಕೆ ಬಗ್ಗೆ ಗಮನವಿಡಲು ಇಂಟರ್ ಪೋಲ್ ಗೆ ಸೂಚನೆ

ಅಂತರ್ಜಾಲದಲ್ಲಿ ಅತಿವೇಗವಾಗಿ ಬೆಳೆಯುತ್ತಿರುವ ಜಿಹಾದಿ ಚಟುವಟಿಕೆಗಳ ಮೇಲೆ ಕಣ್ಣಿಡಲು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಇಂಟರ್ ಪೋಲ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ನ.6ರಂದು ಇಂಟರ್ ಪೋಲ್ ಜನರಲ್ ಅಸೆಂಬ್ಲಿಯ ಸಭೆಯನ್ನುದ್ದೇಶಿಸಿ ಮಾತನಾಡಿರುವ ರಾಜನಾಥ್ ಸಿಂಗ್, ಸಾಮಾಜಿಕ ಜಾಲತಾಣಗಳಲ್ಲಿ ಅನಾಮಿಕತೆಯ ಸೌಲಭ್ಯ...

ಶಾಲೆಗಳಲ್ಲಿ ನಡೆಯುವ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ತಡೆಯಲು ಸಾಧ್ಯವಿಲ್ಲ: ಜಾರ್ಜ್

ಶಾಲೆಗಳಲ್ಲಿ ವಿದ್ಯಾರ್ಥಿನಿಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ತಡೆಯಲು ಸಾಧ್ಯವಿಲ್ಲ, ಪೊಲೀಸರು ಶಾಲೆಯೊಳಗೆ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಕೆ.ಜೆ ಜಾರ್ಜ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕೇಂಬ್ರಿಡ್ಜ್ ಶಾಲೆಯಲ್ಲಿ ದೈಹಿಕ ಶಿಕ್ಷಕನಿಂದಲೇ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ...

ಉದ್ದೇಶಿತ ಗಲಭೆಗಳನ್ನು ತಡೆದಿದ್ದಕ್ಕೆ ಸರ್ಕಾರದ ಮೇಲೆ ಬಿಜೆಪಿಗೆ ಅಸಹನೆ: ಕೆ.ಜೆ ಜಾರ್ಜ್

ಕೆಲ ಬಿಜೆಪಿ ನಾಯಕರು ರೂಪಿಸಿದ್ದ ಉದ್ದೇಶಿತ ಗಲಭೆಯನ್ನು ಹತ್ತಿಕ್ಕಿರುವುದರಿಂದ ಅವರಿಗೆ ಕಾಂಗ್ರೆಸ್ ಸರ್ಕಾರದ ಮೇಲೆ ಅಸಹನೆ ಮೂಡಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದಾರೆ ಎಂದು ಗೃಹ ಸಚಿವ ಕೆ.ಜೆ ಜಾರ್ಜ್ ಆರೋಪಿಸಿದ್ದಾರೆ. ರಾಜ್ಯದಲ್ಲಿ ಕಾನೂನು...

ಉಗ್ರರ ದಾಳಿ ಸಾಧ್ಯತೆ ತಳ್ಳಿಹಾಕುವಂತಿಲ್ಲ: ರಾಜನಾಥ್ ಸಿಂಗ್

ದೇಶದ ಪ್ರಮುಖ ನಗರಗಳಲ್ಲಿ ಉಗ್ರರ ದಾಳಿ ನಡೆಯುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಉಗ್ರರ ವಿಧ್ವಂಸಕ ಕೃತ್ಯ ನಡೆಯುವುದಿಲ್ಲ ಎಂದು ಉಗ್ರರ ಚಟುವಟಿಕೆಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ, ಈ ಹಿನ್ನೆಲೆಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ಹೈ-ಅಲರ್ಟ್...

ಭಾರತಕ್ಕೆ ಎಚ್ಚರಿಕೆ ನೀಡುವ ಅಗತ್ಯವಿಲ್ಲ: ಚೀನಾಗೆ ರಾಜನಾಥ್ ಸಿಂಗ್ ತೀಕ್ಷ್ಣ ಪ್ರತಿಕ್ರಿಯೆ

'ಅರುಣಾಚಲ ಪ್ರದೇಶ'ದಲ್ಲಿ 2000 ಕಿ.ಮೀ ಉದ್ದದ ರಸ್ತೆ ನಿರ್ಮಾಣದ ನಿರ್ಮಾಣದ ಭಾರತ ಸರ್ಕಾರದ ಪ್ರಸ್ತಾಪಕ್ಕೆ ಚೀನಾ ವ್ಯಕ್ತಪಡಿಸಿರುವ ವಿರೋಧಕ್ಕೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತಕ್ಕೆ ಯಾರೂ ಎಚ್ಚರಿಕೆ ನೀಡುವ ಹಾಗಿಲ್ಲ ಹಾಗೂ ಭಾರತವನ್ನು ಹೆದರಿಸಲು...

ಸಾಯಿ ಭಕ್ತರ ವಿದೇಶಿ ಫಂಡ್ ಬಗ್ಗೆ ತನಿಖೆ ನಡೆಯಲಿ: ಸ್ವರೂಪಾನಂದ ಸರಸ್ವತಿ ಸ್ವಾಮೀಜಿ

'ಸಾಯಿ ಬಾಬಾ' ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ದ್ವಾರಕಾ ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ಸ್ವಾಮೀಜಿ ಮತ್ತೊಂದು ಹೇಳಿಕೆ ನೀಡಿದ್ದು ದೇಶಾದ್ಯಂತ ಇರುವ ಸಾಯಿ ಬಾಬಾ ದೇವಾಲಯಗಳಿಗೆ ವಿದೇಶದಿಂದ ಬರುತ್ತಿರುವ ದೇಣಿಗೆ ಬಗ್ಗೆ ತನಿಖೆ ನಡೆಸಬೇಕೆಂದು ಹೇಳಿದ್ದಾರೆ. ಸನಾತನ ಧರ್ಮವನ್ನು ವಿರೂಪಗೊಳಿಸುವುದಕ್ಕಾಗಿ ಸಾಯಿ...

ಪಂಡಿತರಿಗೆ ಪುನರ್ವಸತಿ: ಜಮ್ಮು-ಕಾಶ್ಮೀರ ಸಿ.ಎಂ ಓಮರ್ ಅಬ್ದುಲ್ಲಾಗೆ ಕೇಂದ್ರದ ಪತ್ರ

ಕಾಶ್ಮೀರಿ ಪಂಡಿತರಿಗೆ ಪುನರ್ವಸತಿ ಕಲ್ಪಿಸಲು ಸೂಕ್ತ ಸ್ಥಳವನ್ನು ಗುರುತಿಸುವಂತೆ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸೂಚನೆ ನೀಡಿದ್ದಾರೆ. ಕಾಶ್ಮೀರಿ ಪಂಡಿತರಿಗೆ ಪುನರ್ವಸತಿ ಕಲ್ಪಿಸುವ ಯೋಜನೆ ಬಗ್ಗೆ ಓಮರ್ ಅಬ್ದುಲ್ಲಾ ಗೆ ಪತ್ರ ಬರೆದಿರುವ ರಾಜನಾಥ್...

ಪಾಕ್ ಭಯೋತ್ಪಾದನೆ ನಡುವೆ ಶಾಂತಿ ಮಾತುಕತೆ ಅಸಾಧ್ಯ: ರಾಜನಾಥ್ ಸಿಂಗ್

'ಪಾಕಿಸ್ತಾನ' ಭಯೋತ್ಪಾದನೆ ನಿಲ್ಲಿಸುವವರೆಗೆ ದ್ವಿಪಕ್ಷೀಯ ಮಾತುಕತೆ ನಡೆಸಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಪಾಕ್ ನೊಂದಿಗೆ ನಡೆಯಬೇಕಿದ್ದ ವಿದೇಶಾಂಗ ಕಾರ್ಯದರ್ಶಿ ಮಟ್ಟದ ಸಭೆಯನ್ನು ಭಾರತ ರದ್ದುಪಡಿಸಿದ ಬೆನ್ನಲ್ಲೇ ಕೇಂದ್ರ ಗೃಹ ಸಚಿವರು ಸದ್ಯದಲ್ಲೇ ಪಾಕ್ ಗೃಹ...

ಉಗ್ರರು ನುಸುಳುವ ಶಂಕೆ: ರಾಜಸ್ಥಾನದಲ್ಲಿ ಹೈ ಅಲರ್ಟ್

ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗುವ ಉದ್ದೇಶದಿಂದ ಭಯೋತ್ಪಾದಕರು ರಾಜಸ್ಥಾನ ಗಡಿ ಮೂಲಕ ಭಾರತವನ್ನು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಉಗ್ರರು ಭಾರತಕ್ಕೆ ನುಸುಳುವ ಬಗ್ಗೆ ಗೃಹ ಸಚಿವಾಲಯಕ್ಕೆ ಮಾಹಿತಿ ರವಾನೆಯಾಗಿದ್ದು ರಾಜಸ್ಥಾನದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ....

ಕೇಂದ್ರ ಸಚಿವ ಡಿ.ವಿ.ಎಸ್ ಪುತ್ರನ ಮೇಲೆ ಕ್ರಮ ಕೈಗೊಳ್ಳಲು ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ

ಕೇಂದ್ರ ರೈಲ್ವೇ ಸಚಿವ ಡಿ.ವಿ ಸದಾನಂದ ಗೌಡರ ಪುತ್ರ ಕಾರ್ತಿಕ್ ಗೌಡ ಅವರ ವಿರುದ್ಧ ವಂಚನೆ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಧರಣಿ ನಡೆಸಿದ್ದಾರೆ. ಬೆಂಗಳೂರಿನ ಮೌರ್ಯ ಸರ್ಕಲ್‌ನ ಗಾಂಧಿ ಪ್ರತಿಮೆ ಬಳಿ ನೂರಾರು ಕಾರ್ಯಕರ್ತರು...

ರಾಜನಾಥ್ ಸಿಂಗ್ ಕುಟುಂಬದ ವಿರುದ್ಧದ ಆರೋಪ ಸುಳ್ಳು: ಅಮಿತ್ ಶಾ

ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸಮರ್ಥಿಸಿಕೊಂಡಿದ್ದು, ರಾಜನಾಥ್ ಸಿಂಗ್ ಅವರ ಕುಟುಂಬ ಅವ್ಯವಹಾರದಲ್ಲಿ ತೊಡಗಿದೆ ಎಂಬುದು ಸುಳ್ಳು ಎಂದು ಹೇಳಿದ್ದಾರೆ. ರಾಜನಾಥ್ ಸಿಂಗ್ ಹಾಗೂ ಅವರ ಪುತ್ರ ಪಂಕಜ್ ಸಿಂಗ್ ಅವರ ವಿರುದ್ಧ...

ಬೋಡೋ ಉಗ್ರರ ಅಟ್ಟಹಾಸ: ಅಸ್ಸಾಂ ಯುವತಿಯ ಹತ್ಯೆ

ಅಸ್ಸಾಂ ನಲ್ಲಿ ಬೋಡೋ ಉಗ್ರ ಸಂಘಟನೆ ಅಟ್ಟಹಾಸ ಮಿತಿಮೀರಿದ್ದು ಚಿರಂಗ್ ಜಿಲ್ಲೆಯಲ್ಲಿ ಅಸ್ಸಾಂ ಯುವತಿಯೋರ್ವಳನ್ನು ಹತ್ಯೆ ಮಾಡಿರುವ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಹತ್ಯೆಗೀಡಾಗಿರುವ ಯುವತಿ ಬೋಡೋ ಸಂಘಟನೆ ಬಗ್ಗೆ ಮಾಹಿತಿ ನೀಡುತ್ತಿದ್ದ ಹಿನ್ನೆಲೆಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಉಗ್ರರು ಹೇಳಿದ್ದಾರೆ. ಐವರು...

ಕೆ.ಪಿ.ಎಸ್.ಸಿ ಹಗರಣ: ಮುಖ್ಯಮಂತ್ರಿ ಸಿದ್ದರಾಮಯ್ಯ, ಎ.ಜಿ ರಾಜೀನಾಮೆಗೆ ಹೆಚ್.ಡಿ.ಕೆ ಒತ್ತಾಯ

2011ನೇ ಸಾಲಿನ ಕೆ.ಪಿ.ಎಸ್.ಸಿ ನೇಮಕಾತಿ ರದ್ದತಿ ಪೂರ್ವನಿಯೋಜಿತ, ನೇಮಕಾತಿ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಡೊಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್ ಅವರು ಭಾಗಿಯಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ಹಗರಣದಲ್ಲಿ ಭಾಗಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಎ.ಜಿ ರವಿವರ್ಮ ಕುಮಾರ್...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited